Friday, January 4, 2013

ಜೀವದಳೊಂದು ಜೀವ


ಜೀವದಳೊಂದು ಜೀವ


ಜೀವ-ಜೀವವು ಬೆರೆಯುತಲಿರಲು, ನನ್ನೊಳ ಸೇರಿದೆಯಾ…
ನನ್ನಲಿ ತಿಂದು , ನನ್ನೊಳ  ಮಿಂದು, ನನ್ನನೇ ಒದೆಯುವೆಯಾ ?
ಬರಡು ಬಾಳಲಿ ಮೊಗ್ಗಂತೆ ಅರಳಿ , ಮಡಿಲನು ತುಂಬುವೆಯಾ..
ಮಮತೆಯ ಕಂಡು , ಹಾಲನು ಉಂಡು, ನಗುತಲಿ ಮಲಗುವೆಯಾ..
ರಚ್ಚೆಯ ಹಿಡಿದು , ರಗಳೆಯ ಮಾಡಿ, ಕೋಪದಿ ಕುಣಿಯುವೆಯಾ ?
ಸ್ನಾನವ ಮಾಡಿ , ಜೋಗುಳ ಹಾಡನು ನಲಿಯುತ ಕೇಳುವೆಯಾ..
ತೆವಳುತ, ತೊದಲುತ, ತಿರುಗಿಸಿ ನನ್ನ ಮನವನು ರಮಿಸುವೆಯಾ ?
ಬೆರಳನು ಹಿಡಿದು, ನಡಿಯಲು ಕಲಿತು, ನನ್ನನು ಆಡಿಸುವೆಯಾ ..
"ಅಮ್ಮಾ" ಎಂದು ಬೇಗನೆ ಕರೆದು, ನೋವನು ಮರೆಸುವೆಯಾ ??


Friday, October 21, 2011

Gokarna...

Recently me and my husband had been to Gokarna. I must say its an awesome place. Fortunately for us, there was no one in the Kudle Beach, For hours together, it was only me and Karthik.. This poem is the result of spending some really good time with my husband at our private beach... Hope you enjoy it..

ವಾರಿಧಿಯ ಮಡಿಲಲ್ಲಿ

ಕಡಲಲೆಗಳ
ಮೊರೆತ , ಹೇಳುತಿದೆ ನೀನು ನನ್ನವನೆಂದು ,
ನಿನ್ನ ಕಣ್ಗಳ ಸೆಳೆತ , ಸಾರುತಿದೆ ನಾನು ನಿನ್ನವಳೆಂದು..
ಸೂರ್ಯನ ಕಿರಣ ನೀರಿಗೆ ಮುತ್ತಿಕ್ಕುವಾಗ ,
ಚಂದ್ರನ ಬಿಂಬ ನೀರಲ್ಲಿ ಮೂಡುವಾಗ,
ಮಳೆ ಹನಿಗಳು ಸಮುದ್ರವ ಸೇರಿದಾಗ,
ಮರಳಲ್ಲಿ ಮಗುವೊಂದು ಅರಮನೆಯ ಕಟ್ಟಿದಾಗ,
ಎಲ್ಲೆಂದರಲ್ಲಿ , ಎಲ್ಲಿದ್ದರಲ್ಲಿ,
ನಿನ್ನ ಪ್ರೀತಿಯ ನೆನೆ ನೆನೆದು ಬೀಗುವುದೇ ದಿನ-ರಾತ್ರಿಯ ಕೆಲಸವಾಗಿದೆ ..

ನಿನ್ನನ್ನು ಎಲ್ಲರಿಂದ ದೋಚುವುದು ಮಜವಾಗಿದೆ,
ಕಣ್ಗಳಿಂದ ನೀ ನಗುವಾಗ ಹುಚ್ಚೆದ್ದು ಕುಣಿಯುವ ಮನಸ್ಸಾಗಿದೆ ,
ಕಣ್ಮುಂದೆ ಅರಬಿ ಕಡಲು , ಪಕ್ಕದಲ್ಲಿ ಇನಿಯನ ಮಡಿಲು,
ಇನ್ನೇನೂ ನಾ ಬೇಡೆನು ಎಂದು ವಿಧಿಗೆ ತಲೆ ಬಾಗಿ ನಮಿಸುವ ಸಂಜೆಯಾಗಿದೆ ..

Monday, August 22, 2011

ಬದಲಾವಣೆ :

ಕಾಲಕ್ಕೆ ಗಾಳ ಹಾಕಿ ತಡೆಯಲಾದೀತೇ ,
ಹೃದಯಕ್ಕೆ ಭಾವಗಳ ಕಟ್ಟಿ ಎಳೆಯಲಾದೀತೇ..
ಇಂದು ಇವರು , ನಾಳೆ ಅವರು ಎಂದು ಹೇಳುವ ಮನಸ್ಸನ್ನು ಜರೆಯಲಾದೀತೇ ??

ಮನಸ್ಸೆಂಬ ರಾಜನ ಸೇವಕರು ನಾವು ,
ಅದು ಹೇಳಿದಂತೆ ಕುಣಿಯುವ ಮೂರ್ಖರು ನಾವು ..
ಬೀಳೆಂದರೆ ಬೀಳುವ , ಏಳೆಂದರೆ ಏಳುವ ಮಂಗಗಳು ನಾವು.

ಅಲೆಗಳು ಯಾವ ದಡಕ್ಕೂ ಸ್ವಂತವಲ್ಲ ,
ಕನಸುಗಳು ಎರಡು ಕಣ್ಣಿನದಲ್ಲ..
ಇಂದು ನಿನ್ನದಾಗಿದ್ದು ನಾಳೆ ನಿನ್ನದಲ್ಲ ..

Thursday, March 31, 2011

जान!!
प्यार सबकी किस्मत में नहीं होती ,
यही सोचकर ज़िन्दगी गुज़ारा करते थे हम ..
बस एक ही दुआ में मन्नत पूरी नहीं होती ,
हर दुआ में आपको माँगा करते थे हम
इश्क क्या जन्नत दिखाती है ,
अभी-अभी आँखें खोलकर देख रहे है,

हमारे दिल के शेहेंशाह हो आप ,
यु ही किसी पे मरा नहीं करते हैं हम....

Wednesday, September 29, 2010

ಸೊಗಸು...

ಕಡಲಲೆಗಳಂತೆ ಎದೆ ಬಡಿಯುತಲಿಹುದು,
ಹುಣ್ಣಿಮೆ ಚಂದ್ರನಂತೆ ನೀ ಬಂದಾಗ ಅದು ಏರುವ ಪರಿ ಸೊಗಸು.
ನವಿಲಂತೆ ಮನ ಕಾದಿಹುದು,
ಮಳೆಯಂತೆ ನೀ ಬಂದಾಗ ಅದು ಕುಣಿಯುವ ಪರಿ ಸೊಗಸು.
ಮುಂಜಾವಿನ ಮೊಗ್ಗಂತೆ ಪ್ರೀತಿ ಅವಿತಿಹುದು,
ಸೂರ್ಯನಂತೆ ನೀ ಬಂದಾಗ ಅದು ಅರಳುವ ಪರಿ ಸೊಗಸು.

ಬಾಡಿದ ಜೀವವ ಹಸಿರಾಗಿಸಿರುವೆ,
ಮರುಭೂಮಿಯ ಮನದಲ್ಲಿ ಪ್ರಕೃತಿಯಂತೆ ಪಸರಿಸಿರುವೆ
ನಿನ್ನೊಲವಿನ ನದಿಯಲ್ಲೇ ಬದುಕಿರುವ ಮೀನಾಗಿರುವೆ ಚಿನ್ನ
ನೀನಿರದೆ ಜೀವ ಒದ್ದಾಡುವ ಪರಿ ಸೊಗಸು....

Wednesday, December 23, 2009

ಕುರುಡು ಸಮಾಜ ??

ಕಣ್ಗಳು ಕಾಣದ ಜೀವಗಳು ಕನಸ ಕಾಣಲು ಕಲಿತಿವೆ ,
ಕನಸುಗಳನ್ನು ನನಸಾಗಿಸಲು ಎಂದೋ ಪಣವ ತೊಟ್ಟಿವೆ
ಸೃಷ್ಟಿಕರ್ತನ ಶಪಿಸುವ ಬದಲು ನ್ಯೂನತೆಯ ಮೆಟ್ಟಿ ನಿಂತಿವೆ ,
ಒಂದೇ ಆದರೂ ಹಗಲು ಇರುಳು, ಲಕ್ಷ್ಯವನ್ನು ಗಟ್ಟಿ ಹಿಡಿದಿವೆ
ನೆರಳು ಬೆಳಕಿನ ಮನದಲ್ಲಿ ಬಣ್ಣದ ಚಿಟ್ಟೆಗಳು ಹಾರುತ್ತಿವೆ
ನಾವೂ ಬದುಕಿದ್ದೇವೆ ಎಂದು ಕುರುಡಾದ ಸಮಾಜಕ್ಕೆ ಸಾರುತ್ತಿವೆ

ಅವರ ಕನಸುಗಳು ನಾಪಿಕವಾಗದಿರಲಿ
ಜೀವನದ ಮೇಲಿರುವ ಭರವಸೆಗಳು ಕುಗ್ಗದಿರಲಿ
ಹೊಸಬೆಳಕಿನ ಹುರುಪು ಹಸನಾಗಿರಲಿ
ಆಸೆಗಳ ಅಂಬಾರಿ ಸಾಗುತಲಿರಲಿ ....

ಹೊಳೆಯ ದಡದಿ

ಹೊಳೆ ದಡದಲ್ಲಿ ಕೂತಿರುವೆ ಗೆಳೆಯ
ನಿನ್ನ ಮೋಸವ ನೆನೆದು,
ನೀನಿಲ್ಲದೆ ನಗುತಿರುವೆ ಇನಿಯ
ಒಳಗಿರುವ ನೋವನ್ನು ಬಿಗಿದು

ಕಣ್ಣಂಚಲಿ ಇರುವ ಹನಿ ಕೊರಗಿದೆ
ಒಳಗೆ ಇರಲಾರದೆ , ಹೊರಗೆ ಬರಲಾರದೆ
ಕಣ್ಣೀರೇ ಅಳುತಿದೆ ....

ಬಾನಲ್ಲಿ ಇರುವ ಮೋಡ ನಕ್ಕಿತು ,
ನಾನು ಅತ್ತರೆ ಬಾನಿಂದ ದೂರಾಗುವೆ
ಭೂಮಿಯ ಒಪ್ಪಿಗೆ ಪಡೆದು
ಮತ್ತೆ ಬಾನಲ್ಲೇ ತೆಲಾಡುವೆ ಎಂದಿತು ..

ಕಣ್ಣೇರು ಅಳುವನ್ನು ನಿಲ್ಲಿಸಿತು
ಕಣ್ಣು, ರೆಪ್ಪೆಯ ಮುಚ್ಚುತ್ತಲೇ
ಹನಿಯು ಭೂಮಿಯ ಸೇರಿತು ..

ಸೂರ್ಯಾಸ್ಥವಾಗಿದೆ , ಕತ್ತಲು ಹರಡಿದೆ
ನಿನ್ನ ನೆನಪೆಲ್ಲವ ಹೊಳೆಯಲ್ಲಿ ಬಿಟ್ಟು
ಕಣೀರನು ದಡದಲ್ಲಿ ಸುಟ್ಟು
ಕಾಲು ಮನೆಯ ಕಡೆ ಹೆಜ್ಜೆ ಹಾಕಿದೆ ..